ಮಹೀಂದ್ರಾ ಗ್ರೂಪ್ 20.7 ಬಿಲಿಯನ್ ಯುಎಸ್ ಡಾಲರ್‌ನ ಕಂಪನಿಗಳ ಒಕ್ಕೂಟವಾಗಿದ್ದು, ಅದು ಆವಿಷ್ಕಾರಿ ಮೊಬಿಲಿಟಿ ಪರಿಹಾರಗಳ ಮೂಲಕ ಜನರ ಏಳಿಗೆಗಾಗಿ ದಾರಿಮಾಡಿಕೊಡುತ್ತದೆ, ಗ್ರಾಮೀಣ ಸಮೃಧ್ಧಿಗೆ ಚಾಲನೆ ನೀಡಲು, ನಗರ ಜೀವನವನ್ನು ಉತ್ತಮಗೊಳಿಸಲು, ಹೊಸ ಬಿಸಿನೆಸ್‌ಗಳನ್ನು ಬೆಳೆಸಲು ಹಾಗೂ ಸಮುದಾಯಗಳನ್ನು ಪೋಷಿಸಲು ಅನುವು ಮಾಡಿಕೊಡುತ್ತದೆ. ಇದು ಭಾರತದಲ್ಲಿ ಯುಟಿಲಿಟಿ ವಾಹನಗಳು, ಇನ್‌ಫಾರ್ಮೇಶನ್ ಟೆಕ್ನಾಲಾಜಿ, ಫೈನಾನ್ಶಿಯಲ್ ಸೇವೆಗಳು ಹಾಗೂ ವೆಕೇಶನ್ ಓನರ್‌ಶಿಪ್‌ನಲ್ಲಿ ನಾಯಕತ್ವದ ಪಾತ್ರವನ್ನು ನಿರ್ವಹಿಸುತ್ತಿದೆ ಹಾಗೂ ಪರಿಮಾಣದ ಪ್ರಕಾರ ವಿಶ್ವದ ಅತಿದೊಡ್ಡ ಟ್ರ್ಯಾಕ್ಟರ್ ಕಂಪನಿಯಾಗಿರುತ್ತದೆ. ಇದು ಅನೇಕ ಇತರ ಬಿಸಿನೆಸ್‌ಗಳೊಂದಿಗೆ ಆ್ಯಗ್ರಿಬಿಸಿನೆಸ್, ಏರೋಸ್ಪೇಸ್, ಕಮರ್ಷಿಯಲ್ ವಾಹನಗಳು, ಘಟಕಗಳು, ಡಿಫೆನ್ಸ್, ಲಾಜಿಸ್ಟಿಕ್ಸ್, ರಿಯಲ್‌ಎಸ್ಟೇಟ್, ನವೀಕರಿಸಬಹುದಾದ ಇಂಧನ, ಸ್ಪೀಡ್‌ಬೋಟ್ಸ್ ಹಾಗೂ ಸ್ಟೀಲ್ ಉದ್ಯಮಗಳಲ್ಲಿ ಸಹ ಪ್ರಬಲವಾದ ಉಪಸ್ಥಿತಿಯನ್ನು ಹೊಂದಿದೆ. ಭಾರತದಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಮಹೀಂದ್ರಾ, 100 ದೇಶಗಳಾದ್ಯಂತ 2,40,000ಕ್ಕೂ ಹೆಚ್ಚು ಜನರನ್ನು ಉದ್ಯೋಗಕ್ಕೆ ನೇಮಿಸಿಕೊಂಡಿದೆ.
www.mahindra.com / Twitter and Facebook: @MahindraRise ನಲ್ಲಿ ಮಹೀಂದ್ರಾದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಿ