AD BLUE ಒಂದು ಸ್ಥಿರ, ವಿಷಕಾರಿಯಲ್ಲದ ಸೊಲ್ಯೂಷನ್ ಆಗಿದ್ದು, ಇದು ಸಂಶ್ಲೇಷಿತ ಯೂರಿಯಾ ಹಾಗೂ ಡಿ-ಆಯಾನೈಝ್ಡ್ ನೀರಿನ ಸಂಯೋಜನೆಯಾಗಿರುತ್ತದೆ. ಇದು ಎಕ್ಸಾಸ್ಟ್ ಗ್ಯಾಸ್ನ ಮರುಪರಿಚಲನೆಯನ್ನು ನಿವಾರಿಸುವುದರಿಂದ ಹೆಚ್ಚಿನ ಇಂಧನ ಕ್ಷಮತೆ ಹಾಗೂ ಉಳಿತಾಯಕ್ಕೆ ಕಾರಣವಾಗುತ್ತದೆ. 11 ಡಿಗ್ರಿ ಸೆಲ್ಸಿಯಸ್ ಹಾಗೂ +32 ಡಿಗ್ರಿ ಸೆಲ್ಸಿಯಸ್ ನಡುವೆ ಸ್ರಂಗ್ರಹಿಸಿದಾಗ AD BLUE 2 ವರ್ಷಗಳವರೆಗಿನ ದೀರ್ಘ ಶೆಲ್ಫ್ ಲೈಫ್ ಹೊಂದಿರುತ್ತದೆ. ಘನೀಕರಿಸುವಿಕೆ ಹಾಗೂ ಕರಗಿಸುವಿಕೆಯು ಅದರ ರಾಸಾಯನಿಕ ಗುಣಲಕ್ಷಣಗಳನ್ನು ಬದಲಾಯಿಸುವುದಿಲ್ಲ.
ಒರಟಾದ [ಏರು -ತಗ್ಗು] ಭೂಪ್ರದೇಶದ ಮೂಲಕ ಪ್ರಯಾಣಿಸುವುದು, ಇಳಿಜಾರಾದ ರಸ್ತೆಗಳನ್ನು ಹತ್ತಿ-ಇಳಿಯುವುದು ಅಥವಾ ಹೆಚ್ಚು ದೂರದವರೆಗೆ ಭಾರವಾದ ಲೋಡ್ಗಳನ್ನು ಸಾಗಿಸುವುದು. ನಿಮ್ಮ ಬಿಸಿನೆಸ್ಗೆ ಏನೇ ಅಗತ್ಯವಿದ್ದರೂ, ಮಹೀಂದ್ರಾ ಟ್ರಕ್ ಆ್ಯಂಡ್ ಬಸ್ ಗ್ರಾಹಕರ ಅಪೇಕ್ಷೆಯನ್ನು ಪೂರೈಸುತ್ತದೆ. ಏಕೆಂದರೆ ಅದರ ಒಳಭಾಗದಲ್ಲಿ ವಿಶ್ವ-ವಿಖ್ಯಾತ FuelSmart ಎಂಜಿನ್ ಇದೆ. ಪ್ರಾಡಕ್ಟ್ ಕಾನ್ಪಿಗರೇಶನ್ ಹಾಗೂ ಕಂಪೋನೆಂಟ್ ಟೆಕ್ನಾಲಾಜಿಯ ವಿಷಯದಲ್ಲಿ ಹೊಸ FuelSmart ಎಂಜಿನ್ ಭಾರತದಲ್ಲಿನ ಹೆವಿ ವಾಣಿಜ್ಯ ವಾಹನದ ವಿಭಾಗದಲ್ಲಿ ಅತ್ಯಂತ ಆಧುನಿಕ ಎಂಜಿನ್ಗಳಲ್ಲಿ ಒಂದಾಗಿದೆ. ಆದರೆ ಇದರಲ್ಲಿ ಆಧುನಿಕ ಘಟಕಗಳಲ್ಲದೆ ಎಂಜಿನ್ ಅನ್ನು ಸದೃಢಗೊಳಿಸುವ ಇನ್ನೂ ಹಲವಾರು ಅಂಶಗಳಿವೆ.
VIDEO
ಸ್ಮಾರ್ಟ್ SCR
ಮಹೀಂದ್ರಾದ SCR ಟೆಕ್ನಾಲಾಜಿಯು ಹೆವಿ ಕಮರ್ಷಿಯಲ್ ವಾಹನಗಳಿಂದ ಹೊರಸೂಸುವಿಕೆಯನ್ನು ನಿಯಂತ್ರಿಸಲು ಜಾಗತಿಕ ಮಾನದಂಡಗಳನ್ನು ಪೂರೈಸುವುದಲ್ಲದೆ, ಸರಳ ಲೇಔಟ್ ಹಾಗೂ ಕಡಿಮೆ ಸಂಖ್ಯೆಯ ಭಾಗಗಳೊಂದಿಗೆ ಚಾಲಕರು ಹಾಗೂ ಎಂಜಿನಿಯರ್ಗಳಿಗೆ ಕನಿಷ್ಠ ವಿಶೇಷ ತರಬೇತಿಯೊಂದಿಗೆ ಗರಿಷ್ಠ ಪ್ರಯೋಜನವನ್ನು ಪಡೆಯಲು ಅವಕಾಶ ಮಾಡಿಕೊಡುತ್ತದೆ.