ಮಹೀಂದ್ರಾ ಟ್ರಕ್ ಆ್ಯಂಡ್ ಬಸ್ ಮೊಬೈಲ್ ಸರ್ವಿಸ್ ವ್ಯಾನ್
ಮಹೀಂದ್ರಾ ಟ್ರಕ್ ಆ್ಯಂಡ್ ಬಸ್ ಡಿವಿಜನ್ ಸರ್ವಿಸ್ ವ್ಯಾನ್ ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಕೆಟ್ಟು ಹೋದ ವಾಹನಗಳನ್ನು ತಲುಪುವ ಒಂದು ವಿಶಿಷ್ಟ ಸೌಲಭ್ಯವಾಗಿರುತ್ತದೆ. ಚಾಲಕರು NOW ಸರ್ವಿಸ್ ಹೆಲ್ಪ್ ಲೈನ್ 24X7 ಸಂಪರ್ಕಿಸಬಹುದು ಹಾಗೂ ಮೊಬೈಲ್ ಸರ್ವಿಸ್ ವ್ಯಾನ್‌ನಿಂದ ಟ್ರಕ್ ಅಥವಾ ಬಸ್ ರೋಡ್‌ಸೈಡ್ ಸಹಾಯಕ್ಕಾಗಿ ಕೇಳಬಹುದು. ಈ ವ್ಯಾನ್ ಸಹಾಯದ ಅಗತ್ಯವಿರುವ ವಾಹನಗಳ ಲೊಕೇಶನ್ ಅನ್ನು ಪತ್ತೆಹಚ್ಚಿ ಅಗತ್ಯ ಯಾಂತ್ರಿಕ ಸಹಾಯವನ್ನು ನೀಡಲು ಅಲ್ಲಿಗೆ ತಲುಪುತ್ತದೆ. ಸಾಧ್ಯವಾದಷ್ಟು ಬೇಗನೆ ವಾಹನವನ್ನು ದುರಸ್ತಿ ಮಾಡುತ್ತದೆ. ತನ್ಮೂಲಕ ಡೌನ್‌ಟೈಮ್ ಅನ್ನು [ಕೆಟ್ಟು ನಿಲ್ಲುವ ಸಮಯವನ್ನು] ಕಡಿಮೆ ಮಾಡುತ್ತದೆ, ಉತ್ಪಾದಕತೆಯನ್ನು ಹೆಚ್ಚಿಸುತ್ತದೆ.