ರ್ಆಟೋ ಎಕ್ಸ್‌ಪೋ 2014
ಆಟೋ ಎಕ್ಸ್‌ಪೋ 2014ರಲ್ಲಿ MTBL
27ನೇ ಜನವರಿ 2014ರಂದು, ಚಿಂಚ್‌ವಾಡಾ ಕಚೇರಿಯಲ್ಲಿ ಮಾಧ್ಯಮ ಸಂವಾದವನ್ನು ನಡೆಸಲಾಯಿತು, ಇದರಲ್ಲಿ ಪ್ರಮುಖ ಪ್ರಕಾಶಕರಿಗೆ ಮಾರ್ಚ್‌ನಲ್ಲಿ ದೆಹಲಿಯಲ್ಲಿ ನಡೆಯಲಿರುವ ಆಟೋ ಎಕ್ಸ್‌ಪೋ 2014ಕ್ಕಾಗಿ ಮಹೀಂದ್ರಾ ಟ್ರಕ್ ಆ್ಯಂಡ್ ಬಸ್‌ನ ಯೋಜನೆಗಳನ್ನು ಹಂಚಿಕೊಳ್ಳಲು ಆಮಂತ್ರಿಸಲಾಯಿತು.
ಮಹೀಂದ್ರಾ ಟ್ರಕ್ ಆ್ಯಂಡ್ ಬಸ್‌ನ ನಿರ್ದೇಶಕರು ಹಾಗೂ ಮುಖ್ಯಸ್ಥರಾದ ಶ್ರೀ.ರಾಜನ್ ವಡೆರಾ ಹಾಗೂ ಮಹೀಂದ್ರಾ ಟ್ರಕ್ ಆ್ಯಂಡ್ ಬಸ್ MD ಹಾಗೂ CEO ಶ್ರೀ ನಲಿನ್ ಮೆಹತಾ ಅವರು ಬಿಸಿನೆಸ್ ಸ್ಟ್ಯಾಂಡರ್ಡ್, ಟೈಮ್ಸ್ ಆಫ್ ಇಂಡಿಯಾ, ಹಿಂದು ಬಿಸಿನೆಸ್ ಲೈನ್, ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ಹಾಗೂ ಇನ್ನೂ ಹಲವಾರು ಪಬ್ಲಿಕೇಶನ್‌ಗಳ ಪತ್ರಕರ್ತರನ್ನು ಭೇಟಿ ಮಾಡಿದರು, ಮಹೀಂದ್ರಾ ಟ್ರಕ್ ಆ್ಯಂಡ್ ಬಸ್‌ನ ಬಿಸಿನೆಸ್ ಅಪ್‌ಡೇಟ್‌ಗಳನ್ನು ನೀಡಿದರು ಹಾಗೂ ಭಾರತದಲ್ಲಿ ಕಮರ್ಷಿಯಲ್ ವಾಹನಗಳ ಬಿಸಿನೆಸ್‌ನತ್ತ ಮಹೀಂದ್ರಾ ಟ್ರಕ್ ಆ್ಯಂಡ್ ಬಸ್‌ಗಳ ಬದ್ಧತೆಯನ್ನು ಪುನರುಚ್ಚರಿಸಿದರು.
ಆಟೋ ಎಕ್ಸ್‌ಪೋ 2014ರ ಹಿಂದಿನ ತಾರ್ಕಿಕತೆಯು ಮಹೀಂದ್ರಾ ಟ್ರಕ್ ಆ್ಯಂಡ್ ಬಸ್‌ನಿಂದ ನೀಡಲಾಗುವ ದೊಡ್ಡ ಶ್ರೇಣಿಯ ಉತ್ಪನ್ನಗಳು, ಉತ್ಪನ್ನಗಳ ಗುಣಲಕ್ಷಣಗಳು ಹಾಗೂ ಅಗ್ರಿಗೇಟ್‌ಗಳನ್ನು ವಿಶಿಷ್ಟ ಹಾಗೂ ನವೀನ ಡಿಸ್‌ಪ್ಲೇದಲ್ಲಿ ಪ್ರದರ್ಶಿಸುವುದಾಗಿರುತ್ತದೆ. HCV ಶ್ರೇಣಿಯಲ್ಲಿನ TRUXO 37 ಹಾಗೂ TRACO 49, TORRO 25 ಟಿಪ್ಪರ್, ಲೋಡ್‌ಕಿಂಗ್ ZOOM ಕಂಟೇನರ್ ಟ್ರಕ್ ಹಾಗೂ ಟಿಪ್ಪರ್‌ಗಳನ್ನು ಪ್ರದರ್ಶಿಸಲಾಯಿತು. ಇದಲ್ಲದೆ,ಮಹೀಂದ್ರಾ ಟ್ರಕ್ ಆ್ಯಂಡ್ ಬಸ್ ಡಿವಿಜನ್ ವಿಶ್ವದರ್ಜೆಯ ಉತ್ಪನ್ನಗಳ ಹೆಚ್ಚು ವ್ಯಾಪಕವಾದ ಶ್ರೇಣಿಯನ್ನು ನೀಡುವ ನಿರೀಕ್ಷೆಯಿದೆ.
TRACO 49 ಟ್ರ್ಯಾಕ್ಟರ್ ಟ್ರೇಲರ್ ಈಗ 210 ಹಾಗೂ 260 HP ಶಕ್ತಿಶಾಲಿ MPOWER ಎಂಜಿನ್‌ಗಳೊಂದಿಗೆ ಲಭ್ಯವಾಗುತ್ತಿದೆ ಹಾಗೂ ದೀರ್ಘ ಪ್ರಯಾಣಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ವರ್ಗದಲ್ಲಿನ ಅತ್ಯುತ್ತಮ ದರ್ಜೆಯ ಕ್ಯಾಬಿನ್ ಅನ್ನೂ ಹೊಂದಿದೆ. ಕಂಟೇನರೈಸ್ಡ್ ಹೆವಿ ಡ್ಯೂಟಿ ಲೋಡ್‌ಗಳು, ಸಿಮೆಂಟ್, ಸ್ಟೀಲ್, ಬೃಹತ್ ಗಾತ್ರದ ಕಾರ್ಗೋ, ಭಾರಿ ಯಂತ್ರೋಪಕರಣಗಳಂತಹ ಲೋಡ್ ಬಳಕೆಗಳಿಗಾಗಿ ವಿಶೇಷವಾಗಿ ತಯಾರಿಸಲಾಗಿದೆ. ಉತ್ಪನ್ನದ ವಿನ್ಯಾಸವು ಪವರ್ ಹಾಗೂ ಸದೃಢತೆಯಲ್ಲಿ ರಾಜಿ ಮಾಡಿಕೊಳ್ಳದೆ ವಿಶೇಷವಾಗಿ ಉತ್ತಮ ಇಂಧನ ದಕ್ಷತೆಯನ್ನು ನೀಡುವುದಕ್ಕಾಗಿರುತ್ತದೆ.
TRUXO 37, ಅದರ ಅತ್ಯುತ್ತಮ ಪವರ್ ಹಾಗೂ ಉತ್ಕೃಷ್ಟ ಇಂಧನ ಮಿತವ್ಯಯಕ್ಕೆ ಹೆಸರುವಾಸಿಯಾಗಿದೆ, ಮಹೀಂದ್ರಾ ಟ್ರಕ್ ಆ್ಯಂಡ್ ಬಸ್ ಹೊಸ ಸದೃಢ, ಮಲ್ಟಿ-ಆ್ಯಕ್ಸೆಲ್ ಟ್ರಕ್ ಅನ್ನು ಸರಿಯಾದ ಸಮಯದಲ್ಲಿ ಲಾಂಚ್ ಮಾಡಲು ಪ್ರಸ್ತಾಪಿಸಿದೆ. ಇದು ಅದರ ಗ್ರಾಹಕರಿಗೆ ಅದ್ಭುತ ಮೌಲ್ಯ ಹಾಗೂ ಉತ್ತಮ ಗಳಿಕೆಯನ್ನು ಒದಗಿಸುತ್ತದೆ.
ಆಟೋ ಎಕ್ಸ್‌ಪೋ 2014ಕ್ಕಾಗಿ ಯೋಜನೆಗಳ ಬಗ್ಗೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಕಾರ್ಯನಿರ್ವಾಹಕರು- ಟೆಕ್ನಾಲಾಜಿ, ಪ್ರಾಡಕ್ಟ್ ಡೆವಲಪ್‌ಮೆಂಟ್ ಹಾಗೂ ಸೋರ್ಸಿಂಗ್ ಹಾಗೂ ಡೈರೆಕ್ಟರ್ ಹಾಗೂ ಮಹೀಂದ್ರಾ ಟ್ರಕ್ ಆ್ಯಂಡ್ ಬಸ್‌ನ ಪ್ರಮುಖರಾದ ರಾಜನ್ ವಡೇರಾ, ‘‘ಭಾರತೀಯ ವಾಣಿಜ್ಯ ವಾಹನದ ಕ್ಷೇತ್ರದಲ್ಲಿ ಅದ್ಭುತವಾದ ಕಂಪನಿಯ ರೂಪದಲ್ಲಿ ನಮ್ಮ ಉಪಸ್ಥಿತಿಯನ್ನು ವರ್ಧಿಸುವ ಸಲುವಾಗಿ ಹೊಸ ಉತ್ಪನ್ನಗಳಲ್ಲಿ ಗಣನೀಯ ಹೂಡಿಕೆ ಮಾಡಲು ಹಾಗೂ ನಮ್ಮ ಅಸ್ತಿತ್ವದಲ್ಲಿರುವ ಉತ್ಪನ್ನಗಳನ್ನು ಮೇಲ್ದರ್ಜೆಗೇರಿಸಲು ನಾವು ಸಂಪೂರ್ಣವಾಗಿ ಬದ್ಧರಾಗಿದ್ದೇವೆ. ನಮ್ಮ ವೈವಿಧ್ಯಮಯ ಉತ್ಪನ್ನಗಳ ಪ್ರದರ್ಶನಗಳ ಮೂಲಕ ಇದನ್ನು ಮಾಡಲು ಆಟೋ ಎಕ್ಸ್‌ಪೋ ನಮಗೆ ಅವಕಾಶವನ್ನು ಒದಗಿಸುತ್ತದೆ. ಅದಲ್ಲದೆ, ನಮ್ಮ ಅಸ್ತಿತ್ವದಲ್ಲಿರುವ ಶ್ರೇಣಿಯನ್ನು ಪೂರ್ಣಗೊಳಿಸುವ ಹಾಗೂ ಮೇಲ್ದರ್ಜೆಗೇರಿಸುವ ಜೊತೆಗೆ ಲಘು ವಾಣಿಜ್ಯ ವಾಹನಗಳು ಹಾಗೂ ವಾಣಿಜ್ಯ ವಾಹನಗಳನ್ನು ತಯಾರಿಸುವಂತಹ ಹೊಸ ಕ್ಷೇತ್ರದಲ್ಲಿ ಪ್ರವೇಶಿಸುವ ನಮ್ಮ ಯೋಜನೆಗಳೂ ದೃಢ ನಿಶ್ಚಯದ ಹೆಜ್ಜೆಯಲ್ಲಿವೆ.
ಇಂದು ಕಂಪನಿಯು ಏರುಪೇರುಗಳುಳ್ಳ ಭಾರತೀಯ ರಸ್ತೆಗಳಲ್ಲಿ ಭಾರತದಲ್ಲಿ 1 ಲಕ್ಷಕ್ಕಿಂತ ಹೆಚ್ಚು ಲಘು ವಾಣಿಜ್ಯ ವಾಹನಗಳ ಟ್ರಕ್‌ಗಳು ಹಾಗೂ ಬಸ್ಸುಗಳು ಹಾಗೂ 9,000ಕ್ಕಿಂತ ಹೆಚ್ಚು ಹೆವಿ ವಾಣಿಜ್ಯ ವಾಹನಗಳ ಸೇವೆಯನ್ನು ನೀಡುತ್ತಿದೆ. ಅದಕ್ಕಾಗಿ 59 3S CV ಡೀಲರ್‌ಶಿಪ್‌ಗಳು, 334 ಅಧಿಕೃತ ಸರ್ವಿಸ್ ಪಾಯಿಂಟ್‌ಗಳನ್ನು ಒಳಗೊಂಡು 1,856 ಟಚ್ ಪಾಯಿಂಟ್‌ಗಳ ನೆಟ್‌ವರ್ಕ್ ಅನ್ನು ಹೊಂದಿದೆ ಹಾಗೂ ಭಾರತದ ಉದ್ದಗಲಕ್ಕೂ ಮಹತ್ವಪೂರ್ಣ ಟ್ರಕಿಂಗ್ ರೂಟ್‌ಗಳ ಎಟಕುವಿಕೆಯನ್ನು ಇನ್ನಷ್ಟು ಸುಧಾರಿಸಲು ಸ್ಪೇರ್ಸ್ ನೆಟ್‌ವರ್ಕ್ 575 ರಿಟೇಲ್ ಪಾಯಿಂಟ್‌ಗಳನ್ನು ತಲುಪುತ್ತವೆ
ಇಂದು ಕಂಪನಿಯು ಏರುಪೇರುಗಳುಳ್ಳ ಭಾರತೀಯ ರಸ್ತೆಗಳಲ್ಲಿ ಭಾರತದಲ್ಲಿ 1 ಲಕ್ಷಕ್ಕಿಂತ ಹೆಚ್ಚು ಲಘು ವಾಣಿಜ್ಯ ವಾಹನಗಳ ಟ್ರಕ್‌ಗಳು ಹಾಗೂ ಬಸ್ಸುಗಳು ಹಾಗೂ 9,000ಕ್ಕಿಂತ ಹೆಚ್ಚು ಹೆವಿ ವಾಣಿಜ್ಯ ವಾಹನಗಳ ಸೇವೆಯನ್ನು ನೀಡುತ್ತಿದೆ. ಅದಕ್ಕಾಗಿ 59 3S CV ಡೀಲರ್‌ಶಿಪ್‌ಗಳು, 334 ಅಧಿಕೃತ ಸರ್ವಿಸ್ ಪಾಯಿಂಟ್‌ಗಳನ್ನು ಒಳಗೊಂಡು 1,856 ಟಚ್ ಪಾಯಿಂಟ್‌ಗಳ ನೆಟ್‌ವರ್ಕ್ ಅನ್ನು ಹೊಂದಿದೆ ಹಾಗೂ ಭಾರತದ ಉದ್ದಗಲಕ್ಕೂ ಮಹತ್ವಪೂರ್ಣ ಟ್ರಕಿಂಗ್ ರೂಟ್‌ಗಳ ಎಟಕುವಿಕೆಯನ್ನು ಇನ್ನಷ್ಟು ಸುಧಾರಿಸಲು ಸ್ಪೇರ್ಸ್ ನೆಟ್‌ವರ್ಕ್ 575 ರಿಟೇಲ್ ಪಾಯಿಂಟ್‌ಗಳನ್ನು ತಲುಪುತ್ತವೆ
ಬಿಸಿನೆಸ್ ಹಾಗೂ ಗ್ರಾಹಕರತ್ತ ತನ್ನ ಬದ್ಧತೆಗೆ ಅನುಗುಣವಾಗಿ, ಮಹೀಂದ್ರಾ ಟ್ರಕ್ ಆ್ಯಂಡ್ ಬಸ್ ವರ್ಗಾಯಿಸಬಹುದಾದ ಹಾಗೂ ಉದ್ಯಮದಲ್ಲಿ ಮೊಟ್ಟಮೊದಲ 5-ವರ್ಷಗಳ ಅಥವಾ 5 ಲಕ್ಷ ಕಿ.ಮೀ. ವಾರಂಟಿಯಂತಹ ಅನೇಕ ಪ್ರವರ್ತಕ ಉಪಕ್ರಮಗಳನ್ನು ಪ್ರಾರಂಭಿಸಿದೆ. ಟಿಪ್ಪರ್‌ಗಳಿಗಾಗಿ, ಕಂಪನಿಯು ಆನ್-ಸೈಟ್ ವಾರಂಟಿಯನ್ನು ಪ್ರಾರಂಭಿಸಿದೆ ಹಾಗೂ ಆಕರ್ಷಕ AMC ಪ್ಯಾಕೇಜ್ ಅನ್ನು ಪ್ರಸ್ತುತಪಡಿಸಿದೆ. ಚೆಸ್ಸಿಯ ಮೇಲೆ 100%ವರೆಗೆ ಫೈನಾನ್ಸ್ ಹಾಗೂ 5 ವರ್ಷಗಳ ವರೆಗೆ ಸಾಲದ ಅವಧಿಯಂತಹ ಕೊಡುಗೆಗಳು ಈ ಉಪಕ್ರಮದ ಭಾಗವಾಗಿವೆ.