ಸಿಯಾಮ್ 2015
ನಿಮ್ಮ ಬಸ್ ಈಗಷ್ಟೇ ಆಗಮಿಸಿದೆ ...
ಮೂಲಸೌಕರ್ಯವು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯ ಅವಿಭಾಜ್ಯ ಅಂಗವಾಗಿದ್ದರೂ, ಯುಟಿಲಿಟಿ ಹಾಗೂ ರೋಡ್‌ಗಳ ಮೇಲೆ ಮಾಡಿದ ಹೂಡಿಕೆಯನ್ನು ಗರಿಷ್ಠಗೊಳಿಸುವಲ್ಲಿ ಸಾರಿಗೆಯು ಮಹತ್ವದ ಪಾತ್ರವನ್ನು ವಹಿಸುತ್ತದೆ.
ಸುರಕ್ಷತೆ, ದಕ್ಷತೆ ಹಾಗೂ ಪರ್ಫಾರ್ಮೆನ್ಸ್‌ನಂತಹ ನಿರಂತರ ಕಾಳಜಿಯನ್ನು ನಮ್ಮಂತಹ ಕಂಪನಿಗಳ ಮೂಲಕ ನಿಯತಕಾಲಿಕವಾಗಿ ತಿಳಿಸಲಾಗುತ್ತದೆ. ಜವಾಬ್ದಾರಿಯುತ ಸಾರಿಗೆ ಕಂಪನಿಗಳು ಬದಲಾಗುತ್ತಿರುವ ಬಳಕೆದಾರರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಾಡಕ್ಟ್ ಕೊಡುಗೆಗಳನ್ನು ವಿಕಸನಗೊಳಿಸುವುದು ಮುಖ್ಯವಾಗಿರುತ್ತದೆ.
ಮಹೀಂದ್ರಾ ಟ್ರಕ್ ಆ್ಯಂಡ್ ಬಸ್‌ನಲ್ಲಿ ನಾವು ಟ್ರಾನ್ಸ್‌ಪೋರ್ಟ್ ಬಿಸಿನೆಸ್ ಅನ್ನು ಆವಿಷ್ಕರಿಸುವ ಹಾಗೂ ಪ್ರೇರೇಪಿಸುವ ನಿರಂತರ ಪ್ರಯತ್ನದಲ್ಲಿದ್ದೇವೆ. ಸುರಕ್ಷತೆ, ಇಂಧನ ದಕ್ಷತೆ ಹಾಗೂ ಪರ್ಫಾರ್ಮೆನ್ಸ್ ಅನ್ನು ಹೆಚ್ಚಿಸಲು ನಿರಂತರ ಸಂಶೋಧನೆ ಹಾಗೂ ಅನುಷ್ಠಾನವು ಪ್ರತಿ ದಿನ ಉತ್ತಮ ಪ್ರಾಡಕ್ಟಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಅಂತಹ ಎರಡು ಪ್ರಾಡಕ್ಟ್‌ಗಳನ್ನು 4ನೇ SIAM ಬಸ್ ಹಾಗೂ ಸ್ಪೆಷಲ್ ವೆಹಿಕಲ್ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾಯಿತು. ವಾಹನಗಳು ಟೂರಿಸ್ಟರ್ ಆಗಿದ್ದವು.
COSMO – LWB ಆವೃತ್ತಿ ಹಾಗೂ COSMO ಸ್ಕೂಲ್ ಬಸ್ - BS IV ಆವೃತ್ತಿ. ಈ ಎಕ್ಸ್‌ಪೋದೊಂದಿಗೆ, COSMO ಸ್ಕೂಲ್ ಬಸ್ - BS IV ಆವೃತ್ತಿಯನ್ನು ಅನಾವರಣಗೊಳಿಸಲಾಗಿದೆ. ಈ ವಾಹನಗಳು ಇಂಧನ ದಕ್ಷತೆ ಹಾಗೂ ಸುರಕ್ಷತೆಯ ಮೇಲೆ ಕೇಂದ್ರೀಕೃವಾಗಿರುವುದಲ್ಲದೆ, ಸುಂದರವಾದ ಎಕ್ಸ್‌ಟೀರಿಯರ್ ಹಾಗೂ ದಕ್ಷತಾಶಾಸ್ತ್ರೀಯ ವಿನ್ಯಾಸವನ್ನು ಹೊಂದಿದೆ. ಈ ಪ್ರಾಡಕ್ಟ್ ನಿಮ್ಮ ಬಿಸಿನೆಸ್‌ನ ಅಗತ್ಯಗಳಿಗೆ ಪರಿಪೂರ್ಣವಾಗಿ ಹೊಂದಾಣಿಕೆಯಾಗುತ್ತದೆ ಎಂದು ನಾವು ನಂಬುತ್ತೇವೆ.
ಈ ಕಾರ್ಯಕ್ರಮವನ್ನು 15ರಿಂದ 17 ಜನವರಿ,2015ರವರೆಗೆ ಇಂಡಿಯಾ ಎಕ್ಸ್‌ಪೋರ್ಟ್ ಮಾರ್ಟ್,ಗ್ರೇಟರ್ ನೋಯ್ಡಾ,ದೆಲ್ಲಿ- NCR, ಭಾರತದಲ್ಲಿ ನಡೆಸಲಾಯಿತು. ನಮ್ಮ ಸ್ಟಾಲ್ ಅನ್ನು ಶ್ರೀ ಅಂಬುಜಾ ಶರ್ಮಾ, ಆ್ಯಡಿಶನಲ್ ಸೆಕ್ರೆಟರಿ, ಭಾರಿ ಕೈಗಾರಿಕ ಸಚಿವಾಲಯ, ಶ್ರೀ ವಿಷ್ಣು ಮಾಥುರ್, ಪ್ರಧಾನ ನಿರ್ದೇಶಕರು, SIAM ಹಾಗೂ ಶ್ರೀ ಸುಗಾತೋ ಸೇನ್, ಉಪ ಮಹಾ ನಿರ್ದೇಶಕರು - SIAMರೊಂದಿಗೆ ಉದ್ಘಾಟಿಸಿದರು. ಮಹೀಂದ್ರಾ ಸ್ಟಾಲ್‌ಗೆ ಕೇಂದ್ರ ಸಾರಿಗೆ ಸಚಿವರಾದ ಶ್ರೀ ನಿತಿನ್ ಗಡ್ಕರಿ ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ಸಂಜಯ್ ಬಂದೋಪಾಧ್ಯಾಯ- ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅನೇಕ ಇತರ ಅಧಿಕಾರಿಗಳೊಂದಿಗೆ ಭೇಟಿ ನೀಡಿದರು.
ರಸ್ತೆಯಲ್ಲಿರುವ ಈ ಹೊಸ ಸುಂದರಿಯರ ಕುರಿತು ಇನ್ನಷು ತಿಳಿದುಕೊಳ್ಳಲು ಬಯಸುವಿರಾ? ಇಲ್ಲಿ ಕ್ಲಿಕ್ ಮಾಡಿ:
(www.mytouristeri.com)