Cruzio Grande BS6 - ವೈಶಿಷ್ಟ್ಯಗಳು

ಸ್ಕೂಲ್‌ ಸವಾರಿಗಳು ಈಗ ಮತ್ತಷ್ಟು ಸುರಕ್ಷಿತವಾಗಿವೆ

ಮಹೀಂದ್ರಾ CRUZIO GRANDE GRANDE ಸ್ಕೂಲ್‌ ಬಸ್‌ ಮಕ್ಕಳ ಸುರಕ್ಷತೆಯನ್ನು ಮೊದಲ ಹಾಗೂ ಅತ್ಯಂತ ಪ್ರಮುಖವಾಗಿರಿಸುತ್ತದೆ. ಇದು ಶಾಲೆಗೆ ಹೋಗಿ ಬರುವ ಪ್ರಯಾಣವನ್ನು, ಅತ್ಯಂತ ಹೆಚ್ಚು ಸುರಕ್ಷಿತಗೊಳಿಸುವ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ. ವೆಹಿಕಲ್‌ ಟ್ರ್ಯಾಕಿಂಗ್‌ ಸಿಸ್ಟಮ್‌ (VTS), ಫೈರ್‌ ಡಿಟೆಕ್ಷನ್‌ ಹಾಗೂ ಸಪ್ರೆಶನ್‌ ಸಿಸ್ಟಮ್‌ (FDSS), ರಿಮೋಟ್ಲಿ ಪೈಲೇಟೆಡ್‌ ಏರ್‌ಕ್ರಾಫ್ಟ್‌ ಸಿಸ್ಟಮ್‌ಗಳು (RPAS), ಅತ್ಯಂತ -ಅಗತ್ಯವಾದ ತುರ್ತು ಪರಿಸ್ಥಿತಿಯಲ್ಲಿ ತಪ್ಪಿಸಿಕೊಳ್ಳುವ ದಾರಿಯನ್ನು ಒದಗಿಸಲು ರೂಫ್‌ ಹ್ಯಾಚ್‌, ಪಂಕ್ಚರ್‌ಗಳನ್ನು ತಡೆದುಕೊಳ್ಳುವ ಹಾಗೂ ದೀರ್ಘಕಾಲ ಬಾಳಿಕೆ ಬರುವ ಟ್ಯೂಬ್‌ಲೆಸ್‌ ಟೈರ್‌ಗಳು, ಸುಲಭ ಪ್ರವೇಶ ಹಾಗೂ ಬಸ್‌ನ ಒಳಗೆ ತೊಂದರೆ ರಹಿತ ಚಲನವಲನಕ್ಕಾಗಿ ಅಗಲವಾದ ಬಾಡಿ, ಪ್ರಯಾಣಿಕರಿಗೆ ಹೆಚ್ಚುವರಿ ಸುರಕ್ಷತೆಯ ಭರವಸೆಯನ್ನು ನೀಡುವ ರೋಲ್‌ಓವರ್‌ ಕಂಪ್ಲಾಯೆನ್ಸ್‌ ಹಾಗೂ ಚೈಲ್ಡ್‌ ಚೆಕ್‌-ಮೇಟ್‌ನಂತಹ ವೈಶಿಷ್ಟ್ಯ. ಇಷ್ಟೇ ಅಲ್ಲ. ಈ ಬಸ್‌ ಆರ್‌ಟಿಒ ನಿಗದಿಪಡಿಸಿದ ಎಲ್ಲ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಹೆಚ್ಚಿನ ಭರವಸೆಯನ್ನೂ ನಿಮಗೆ ನೀಡುತ್ತದೆ.

ಗರಿಷ್ಠ ಸುರಕ್ಷತೆ ಹಾಗೂ ಅನುಕೂಲತೆಗಾಗಿ ವಿನ್ಯಾಸಗೊಳಿಸಲಾದ ಅಗಲ ಹಾಗೂ ಆರಾಮದಾಯಕ ಸ್ಕೂಲ್‌ ಬಸ್‌ ಸೀಟ್‌ಗಳು.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ತ್ವರಿತ ಸ್ಥಳಾಂತರಕ್ಕಾಗಿ ತುರ್ತು ನಿರ್ಗಮನ.

AIS140 ಕಂಪ್ಲೈಂಟ್‌ ಹಾಗೂ ಪ್ರತಿ ಪಿಲ್ಲರ್‌ನಲ್ಲಿ ಎಮರ್ಜೆನ್ಸಿ ಬಟನ್‌.

ಮಾರ್ಪಡಿಸಿದ ಹ್ಯಾಟ್‌-ರಾಕ್‌ ಹಾಗೂ ಸ್ಪೇಶಿಯಸ್‌ [ವಿಶಾಲವಾದ ಸ್ಥಳವನ್ನು ಹೊಂದಿರುವ] ಇಂಟೀರಿಯರ್‌.

ಬ್ಯಾಗ್‌ ರಾಕ್‌

ತಕ್ಷಣ ವೈದ್ಯಕೀಯ ಸಹಾಯವನ್ನು ಲಭ್ಯವಾಗಿಸಲು ಪ್ರಥಮ ಚಿಕಿತ್ಸಾ ಪೆಟ್ಟಿಗೆ

ಫೈರ್‌ ಎಕ್ಸ್‌ಟಿಂಗ್ವಿಶರ್‌ [ಅಗ್ನಿ ಶಾಮಕ]

ಸ್ವಿಚ್‌ ಅನ್ನು ಸ್ಪರ್ಶಿಸುತ್ತಿದ್ದಂತೆ ಮೈಲೇಜ್‌ ಹಾಗೂ ಪವರ್‌

ನಿಮ್ಮ ಬಿಸಿನೆಸ್‌ಗೆ ಸ್ಪರ್ಧಾತ್ಮಕ ಮೊನಚನ್ನು ನೀಡಲು ಮಹೀಂದ್ರಾದಿಂದ ಅಬಿವೃದ್ಧಿಪಡಿಸಲಾದ FuelSmart ಸ್ವಿಚ್‌ಗಳನ್ನು ನಿಮಗೆ ನಿಮ್ಮ ಬಿಸಿನೆಸ್‌ನ ಬೇಡಿಕೆಗಳಿಗೆ ಅನುಸಾರವಾಗಿ ಉತ್ತಮ ಮೈಲೇಜ್‌ ಹಾಗೂ ಗರಿಷ್ಠ ಪವರ್‌ ನಡುವೆ ಅಯ್ಕೆ ಮಾಡುವ ಅವಕಾಶವನ್ನು ನೀಡುತ್ತದೆ. ನಿಮ್ಮ ಬಸ್‌ ತುಂಬಿದಾಗ ಹೆವಿ ಮೋಡ್‌ ಆನ್ ಮಾಡಿ.ಹಾಗೂ ಖಾಲಿ ಇರುವಾಗ ಲೈಟ್‌ ಮೋಡ್‌ ಆನ್‌ ಮಾಡಿ. ಪ್ರತಿ ಮೋಡ್‌ mDi Tech FuelSmart ಎಂಜಿನ್‌ನಿಂದ ಗರಿಷ್ಠ ದಕ್ಷತೆಯನ್ನು ಸಾಧಿಸುತ್ತದೆ.

ಮಹೀಂದ್ರಾ ಕ್ರುಝಿಯೊ ಗ್ರ್ಯಾಂಡ್‌ [CRUZIO GRANDE]ನ ಹೃದಯ ಭಾಗದಲ್ಲಿ ಏನಿದೆ?

ಈ ಐಷಾರಾಮಿ ವಾಹನವು ಮಹೀಂದ್ರಾದ mDi Tech FuelSmart ಎಂಜಿನ್‌ನಿಂದ ಚಾಲಿತವಾಗಿದೆ. ಈ ಎಂಜಿನ್‌ ಶಕ್ತಿಶಾಲಿಯಾಗಿರುತ್ತದೆ, ಉತ್ತಮ ದಕ್ಷತೆಯನ್ನು ಹೊಂದಿರುತ್ತದೆ, ಕಡಿಮೆ ಘರ್ಷಣೆಯಿರುತ್ತದೆ, ಹಾಗೂ FuelSmart ಟೆಕ್ನಾಲಾಜಿಯೊಂದಿಗೆ ಬರುತ್ತದೆ. ಆದರೆ ಅತ್ಯಂತ ಮುಖ್ಯವಾಗಿ, ಇದರ ಹಿಂದೆ ದಶಕಕ್ಕೂ ಹೆಚ್ಚು ಕಾಲದಿಂದಿರುವ ಮಹೀಂದ್ರಾದ ಪ್ರತಿಷ್ಠಿತ CRDe ಪರಿಣತಿಯಿದೆ. ಈ ಎಂಜಿನ್‌ 1800 ಬಾರ್‌ ಕಾಮನ್‌ ರೇಲ್‌ ಸಿಸ್ಟಮ್‌ ಹಾಗೂ ಆಲ್ಟರ್‌ನೇಟರ್‌ ವೆಸ್ಟ್‌ಗೇಟ್‌ ಟರ್ಬೊಚಾರ್ಜರ್‌ ಅನ್ನು ಹೊಂದಿದ್ದು, ಅದು ಉನ್ನತ ಪವರ್‌ ಹಾಗೂ ಇಂಧನ ಮಿತವ್ಯಯದ ವಿಶಿಷ್ಟ ಸಂಯೋಜನೆಯನ್ನು ನೀಡುವ ಮೂಲಕ; ಒಟ್ಟಿಗೆ ನಿಮಗೆ ಸುಧಾರಿತ ಪರ್ಫಾರ್ಮೆನ್ಸ್‌ ಅನ್ನು ನೀಡುತ್ತವೆ. ಹೈಡ್ರಾಲಿಕ್‌ ಲ್ಯಾಶ್‌ ಅಡ್ಜಸ್ಟರ್‌ (HLA) ಎಂದರೆ ಪದೇ ಪದೇ ಟ್ಯಾಪೆಟ್‌ ಸೆಟಿಂಗ್‌ ಆವಶ್ಯಕತೆ ಇರುವುದಿಲ್ಲ. ಇದೇ ರೀತಿ ಆಟೋ ಬೆಲ್ಟ್‌ ಟೆನ್ಳನರ್‌ನೊಂದಿಗೆ ಇದು ತನ್ನಿಂದ ತಾನೇ ಸೆಟ್‌ ಆಗುತ್ತದೆ ಹಾಗೂ ಕೈಯಿಂದ ಹೊಂದಿಸಬೇಕಾದ ಅಗತ್ಯವಿರುವುದಿಲ್ಲ.

ಅಲ್ಲದೆ, ಗೇರ್‌ ಚಾಲಿತ ಏರ್‌ ಕಂಪ್ರೆಸರ್‌ ಎಂಜಿನ್‌ನ ವಿಶ್ವಾಸಾರ್ಹತೆಯನ್ನು ಉನ್ನತ ಮಟ್ಟಕ್ಕೆ ವರ್ಧಿಸುತ್ತದೆ. ಎಲೆಕ್ಟಾನಿಕ್‌ ವಿಸ್ಕಾಸ್‌ ಫ್ಯಾನ್‌ ಎಂಜಿನ್‌ನ ತಾಪಮಾನವು ಯಾವಾಗಲೂ ಸುರಕ್ಷಿತ ಮಿತಿಯೊಳಗಡೆ ಇರುವುದನ್ನು ಖಚಿತಪಡಿಸುತ್ತದೆ. ಉನ್ನತ ಕ್ಷಮತೆಯ ಆಲ್ಟರ್‌ನೇಟರ್‌ ಹೆಚ್ಚಿನ ವಿದ್ಯುತ್‌ ಲೋಡ್‌ಗಳಿಂದ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತದೆ. ನೀವು ಅತಿ ಹೆಚ್ಚಿನ ಸರಾಸರಿಗಳು ಹಾಗೂ ಅತ್ಯುತ್ತಮ ಪರ್ಫಾರ್ಮೆನ್ಸ್‌ ಪಡೆಯುವುದನ್ನು ಖಚಿತಪಡಿಸಲು ಅಲ್ಯೂಮೀನಿಯಂ ಫ್ಲೈವ್ಹೀಲ್‌ ಹೌಸಿಂಗ್‌ ಕೂಡಾ ಇದೆ.

ಮಹೀಂದ್ರಾ BS 6 ಆಫ್ಟರ್‌ ಟ್ರೀಟ್‌ಮೆಂಟ್‌ ಸಿಸ್ಟಮ್‌ ಕಡಿಮೆ AdBIue ಎಂದರೆ ಹೆಚ್ಚಿನ ಗಳಿಕೆ.

ಮಹೀಂದ್ರಾ CRUZIO GRANDE ಅನ್ನು ಲಾಭಕ್ಕಾಗಿ ಮಾತ್ರವಲ್ಲದೆ, ಉಳಿತಾಯಕ್ಕಾಗಿಯೂ ನಿರ್ಮಿಸಲಾಗಿದೆ. ಕಡಿಮೆ AdBlue ಬಳಕೆಗಾಗಿ ಮಹೀಂದ್ರಾ ಶಿಫಾರಸು ಮಾಡಿದ AdBlueMaximile ಪ್ಲಸ್‌ ಅನ್ನು ಬಳಸಿ, ಅಂದರೆ ಇಂಧನ ತುಂಬಿಸುವುದಕ್ಕಾಗಿ ಕಡಿಮೆ ಟ್ರಿಪ್‌ಗಳು ಹಾಗೂ ಕಡಿಮೆ AdBlue ಖರ್ಚುಗಳು. ಹಾಗೂ ನಿಮ್ಮ ಟ್ರಾನ್ಸ್‌ಪೋರ್ಟ್‌ ಬಿಸಿನೆಸ್‌ಗಾಗಿ ಇದರ ಅರ್ಥವೇನು? ಸಹಜವಾಗಿ ಗಳಿಕೆಯ ಹೆಚ್ಚಳ.

BS4 ನಿಂದ BS6ಗೆ ಪಯಣವು ಕೇವಲ ಟೆಕ್ನಾಲಾಜಿ ಬದಲಾವಣೆಯ ಬಗ್ಗೆ ಅಲ್ಲ, ಆದರೆ, ಟ್ರಾನ್ಸ್‌ಪೋರ್ಟ್‌ ಉದ್ಯಮದಲ್ಲಿ ಬಿಸಿನೆಸ್‌ ಅನ್ನು ಮಾಡುತ್ತಿರುವ ಜನರ ಮನಃಸ್ಥಿತಿಯನ್ನು ಬದಲಾಯಿಸುವ ಪ್ರಯತ್ನವಾಗಿದೆ ಎಂಬ ಕಂಪನಿಯ ನಂಬಿಕೆಯಿಂದ ಇದೆಲ್ಲವೂ ಬಂದಿದೆ. ಈ ನಂಬಿಕೆಯ ಅರ್ಥವೇನೆಂದರೆ, ಮಹೀಂದ್ರಾತಮ್ಮ ವಾಹನಗಳಾದ ಟ್ರಕ್‌ ಹಾಗೂ ಬಸ್‌ಗಳಲ್ಲಿ ಮಾಡಿಕೊಳ್ಳಬೇಕಿದ್ದ ಬದಲಾವಣೆಗಳು ತುಂಬ ಕಡಿಮೆ ಇದ್ದವು. ಏಕೆಂದರೆ, ಈಗಾಗಲೇ 90% ಬಿಡಿಭಾಗಗಳು ಅವೇ ಆಗಿರುವುದರಿಂದ ಅವರು BS4ಹಂತದಲ್ಲೇ BS6ಗೆ ಸಿದ್ಧರಾಗಿದ್ದರು. ಇದು ನಮ್ಮ ಗ್ರಾಹಕರಿಗೆ ಅಪಾರ ಪ್ರಯೋಜನವನ್ನು ನೀಡುತ್ತದೆ, ಏಕೆಂದರೆ ಅವರು ಬಿಡಿ ಭಾಗಗಳು ಹಾಗೂ ಮಾರಾಟದ ಅನಂತರದ ಸೇವೆಗಳ ಲಭ್ಯತೆಯ ಬಗ್ಗೆ ಚಿಂತಿಸಬೇಕಾಗಿಲ್ಲ.

ಬಗ್ಗೆ ವಿಚಾರಣೆ

ಒಂದು ವೇಳೆ ನಿಮಗೆ ಮಾಹಿತಿ ಬೇಕಾಗಿದ್ದರೆ ನಮ್ಮ ಬಳಿ ಉತ್ತರವಿದೆ.